Jobs-2024/ರಾಜ್ಯದ 4 ಇಲಾಖೆಗಳ ಸರ್ಕಾರಿ ಉದ್ಯೋಗ ಮಾಹಿತಿ-2024

1) ಕರ್ನಾಟಕದ 6 ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳ-ನೇಮಕ-2024

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರಸ್ತುತ ವಿವಿಧ 6 ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ನೇಮಕಾತಿ ಅರ್ಜಿ ಕರೆಯಲಾಗಿದೆ.
ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ, ದ್ವಿತೀಯ ಪಿಯುಸಿ ಹಾಗೂ ತತ್ಸಮಾನ ವಿದ್ಯಾರ್ಹತೆ ಜೊತೆಗೆ ಟೀಚಿಂಗ್ ಕೋರ್ಸ್‌ಗಳನ್ನು ಪಾಸ್‌ ಮಾಡಿದ ಮಹಿಳಾ ಅಭ್ಯರ್ಥಿಗಳಿಗೆ ಜಾಬ್‌ ಆಫರ್‌ ನೀಡಲಾಗಿದೆ..
ಯಾವ್ಯಾವ ಜಿಲ್ಲೆಯಲ್ಲಿ ಅಂಗನವಾಡಿ ಹುದ್ದೆಗಳನ್ನು ಭರ್ತಿಗೆ ಅರ್ಜಿ ಕರೆಯಲಾಗಿದೆ, ಅರ್ಹತೆ ಏನು, ಅರ್ಜಿ ವಿಧಾನ ಸಂಪೂರ್ಣ ಮಾಹಿತಿ ಕೆಳಗೆ ಓದಿ.

* ನೇಮಕಾತಿ- ಜಿಲ್ಲೆ ಗಳು
1) ಬೆಂಗಳೂರು ಗ್ರಾಮೀಣ ಜಿಲ್ಲೆ
2) ಬೆಂಗಳೂರು ನಗರ ಜಿಲ್ಲೆ
ಬೆಳಗಾವಿ
3) ಬೀದರ್, 4) ಹಾವೇರಿ, 5) ತುಮಕೂರು.

* ಹುದ್ದೆಗಳ ಹೆಸರು
1) ಅಂಗನವಾಡಿ ಕಾರ್ಯಕರ್ತೆ
2) ಅಂಗನವಾಡಿ ಸಹಾಯಕಿ

ವೇತನ – INR 6000 to 10000 /Month.

* ಶೈಕ್ಷಣಿಕ ಅರ್ಹತೆ
1) ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು : 12ನೇ ತರಗತಿ ಅಥವಾ ಡಿಪ್ಲೊಮ ಇಸಿಸಿಇ ಅಥವಾ ತತ್ಸಮಾನ ಶಿಕ್ಷಣ ಯಾವುದಾದರೊಂದು ವಿದ್ಯಾರ್ಥಿಯಲ್ಲಿ ಪಾಸ್ ಆಗಿರಬೇಕು.
2) ಅಂಗನವಾಡಿ ಸಹಾಯಕಿ ಹುದ್ದೆ : ಈ ಹುದ್ದೆಗೆ 10ನೇ ತರಗತಿಯಲ್ಲಿ ಪಾಸ್ ಆಗಿರಬೇಕು..

* ವಯೋಮಿತಿ ವಿವರ :
ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು
ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು 35 ವರ್ಷ ವಯಸ್ಸು ಮೀರಿರಬಾರದು.

* ಸಲ್ಲಿಸುವ ವಿಧಾನ
ಅಭ್ಯರ್ಥಿಯ ಅಪ್ಲಿಕೇಶನ್‌ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್‌-ಸೈಟ್ ವಿಳಾಸಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು

ವೆಬ್ಸೈಟ್ ವಿಳಾಸ https://karnemakaone.kar.nic.in

* ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು ಈ ಕೆಳಗಿನಂತಿವೆ.
1. ಜನನ ಪ್ರಮಾಣ ಪತ್ರ/ ಜನ್ಮ ದಿನಾಂಕ ಇರುವ ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ.
2. ಕರ್ನಾಟಕದವರಾಗಿದ್ದರೆ ವಾಸಸ್ಥಳ ದೃಢೀಕರಣ ಪತ್ರ ಬೇಕು.
3. ಅಭ್ಯರ್ಥಿಯ ವಿದ್ಯಾರ್ಹತೆಯ ಬಗ್ಗೆ ಪ್ರಮಾಣ ಪತ್ರ.
4. ವಿಕಲಚೇತನರಿಗೆ ಅಭ್ಯರ್ಥಿಗಳಾಗಿದ್ದಲ್ಲಿ ವಯೋಮಿತಿ ಪ್ರಮಾಣ ಪತ್ರ ಸಲ್ಲಿಸಬೇಕು.
5. ಮೀಸಲಾತಿಯ ಬಗ್ಗೆ ಮತ್ತು ಜಾತಿ ಪ್ರಮಾಣ ಪತ್ರ.
6. ನೀವು ವಿಧವೆಯಾಗಿದ್ದಲ್ಲಿ ನಿಮ್ಮ ಗಂಡನ ಅಥವಾ ಪತಿಯ ಮರಣ ಪ್ರಮಾಣ ಪತ್ರ ಲಗತಿಸಬೇಕು..
7. ನಿಮಗೆ ವಿಚ್ಛೇದನ ಅಗಿದ್ದರೆ ವಿಚ್ಚೇದನ ಪ್ರಮಾಣ ಪತ್ರ ಕೊಡಬೇಕು.
8. ಯೋಜನಾ ನಿರಾಶ್ರಿತರಾಗಿದ್ದರೆ ಆದರ ಪ್ರಮಾಣ ಪತ್ರ ಕೊಡಬೇಕು.
9.ನಿಮ್ಮ ಗಂಡ ರೈತ ಆಗಿ ಅವರು ಏನಾದರೂ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಉಪವಿಭಾಗಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ಕೊಡಬೇಕು..

* ಪ್ರಮುಖ ದಿನಾಂಕ ಪ್ರಾರಂಭಿಕ ದಿನಾಂಕ :- 16/2/2024
ಕೊನೆ ದಿನಾಂಕ 15/2/2024

* ಉದ್ಯೋಗ ಕ್ಷೇತ್ರ – ಸರ್ಕಾರಿ ವಲಯ.

2. KUWSDB Recruitment 2024: ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿಯಲ್ಲಿ 64 ಹುದ್ದೆಗಳಿಗೆ ಅರ್ಜಿ ಆಹ್ವಾನ

KUWSDB Recruitment 2024: ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿ(Karnataka Urban Water Supply and Drainage Board) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 64 ಅಸಿಸ್ಟೆಂಟ್ ಎಂಜಿನಿಯರ್, ಫಸ್ಟ್ ಡಿವಿಶನ್ ಅಕೌಂಟ್ಸ್​ ಅಸಿಸ್ಟೆಂಟ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್)- 50
ಫಸ್ಟ್ ಡಿವಿಶನ್ ಅಕೌಂಟ್ಸ್​ ಅಸಿಸ್ಟೆಂಟ್ (ಗ್ರೂಪ್-ಸಿ)- 14

ವಿದ್ಯಾರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ, ವೇತನ ಇನ್ನಿತರೆ ವಿವರಗಳಿಗಾಗಿ ಅಧಿಕೃತ ನೋಟಿಫಿಕೇಶನ್ ಚೆಕ್ ಮಾಡಿ.

ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ & ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

3. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ನೇಮಕಾತಿ-2024

* ನೇಮಕಾತಿ ಇಲಾಖೆ ಹೆಸರು : ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಮಂಡ್ಯ
(Mandya DCC Bank)

* ಹುದ್ದೆಗಳ ವಿವರ ಮತ್ತು ಸಂಖ್ಯೆ ಹಾಗೂ ವಿದ್ಯಾರ್ಹತೆ :
1) ಕಿರಿಯ ಸಹಾಯಕರು ಹುದ್ದೆ- ಒಟ್ಟು 70 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ : ಈ ಹುದ್ದೆಗೆ ಅಭ್ಯರ್ಥಿ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ ಪಾಸಾಗಿರಬೇಕು ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರುವವರು ಅರ್ಜಿ ಹಾಕಬಹುದು.
2) ಅಟೆಂಡರ್ ಹುದ್ದೆ – ಒಟ್ಟು 21 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಎಸ್‌ಎಸ್‌ಎಲ್‌ಸಿ
ಪಾಸಾಗಿರಬೇಕು.
3) ವಾಹನ ಚಾಲಕರು ಹುದ್ದೆ – ಒಟ್ಟು 02 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು ಹಾಗೂ ವಾಹನ ಚಾಲನೆ ಪರವಾನಗಿ ಹೊಂದಿರಬೇಕು.
4) ವ್ಯವಸ್ಥಾಪಕರು ಹುದ್ದೆ-ಒಟ್ಟು 01 ಹುದ್ದೆ ಖಾಲಿ ಇದೆ.
ವಿದ್ಯಾರ್ಹತೆ: ಈ ಹುದ್ದೆಗೆ ಅಭ್ಯರ್ಥಿ ಕಂಪ್ಯೂಟರ್ ಸೈನ್ಸ್ ಎಂ.ಟೆಕ್
ಸ್ನಾತಕೋತ್ತರ ಪದವಿ ಪಾಸ್ ಆಗಿರಬೇಕು.

ಒಟ್ಟು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದಲ್ಲಿ 94 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

* ವಯೋಮಿತಿ :
1)ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : 18 ರಿಂದ 35 ವರ್ಷ ನಿಗದಿಪಡಿಸಲಾಗಿದೆ.
(ಗಮನಿಸಿ : ಮೀಸಲಾತಿಗನುಗುಣವಾಗಿ ಅಭ್ಯರ್ಥಿಗಳಿಗೆ ವಯೋ ಸಡಿಲಿಕೆ ನೀಡಲಾಗುವುದು)

* ಅರ್ಜಿ ಶುಲ್ಕ
1) ಸಾಮಾನ್ಯ ವರ್ಗ/2a/2b/3a/3b ಅಭ್ಯರ್ಥಿಗಳಿಗೆ :ರೂ 1500/- ನಿಗದಿಪಡಿಸಲಾಗಿದೆ.
2) ಎಸ್‌ಸಿ/ಎಸ್‌ಟಿ/ಸಿ1/ಮಾ.ಸೈ ಅಭ್ಯರ್ಥಿಗಳಿಗೆ : ರೂ 750/- ನಿಗದಿಪಡಿಸಲಾಗಿದೆ.

* ಅರ್ಜಿ ಸಲ್ಲಿಸುವ ವಿಧಾನ –
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

* ನೇಮಕಾತಿ ವಿಧಾನ –
ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ನಂತರ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಅದಾ ಅರ್ಹ ಫಲಾನುಭವಿಗಳಿಗೆ
ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 18 ಜನವರಿ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಫೆಬ್ರವರಿ 2024

ಅಧಿಸೂಚನೆ – ಕ್ಲಿಕ್ಕಿಸಿ

ವೆಬ್‌ಸೈಟ್ www.mandyadccbank.com

4) ಭಾರತೀಯ ವಾಯುಪಡೆಯ ನೇಮಕಾತಿ-2024

* ನೇಮಕಾತಿ ಇಲಾಖೆಯ ಹೆಸರು : ಭಾರತೀಯ ವಾಯುಪಡೆ.
* ಹುದ್ದೆಯ ಹೆಸರು : ಅಗ್ನಿವೀರ್ ವಾಯು ಹುದ್ದೆಗಳು
(ಮದುವೆ ಆಗದೆ ಇರುವ ಪುರುಷ ಮತ್ತು ಮಹಿಳೆ ಮಾತ್ರ ಅವಕಾಶ)
ಹುದ್ದೆಗಳ ಸಂಖ್ಯೆ : ನಂತರ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

* ವಿದ್ಯಾರ್ಹತೆ:
ಈ ಹುದ್ದೆಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ / ತತ್ಸಮಾನ ವಿದ್ಯಾರ್ಹತೆ ಕನಿಷ್ಠ 50% ಅಂಕಗಳೊಂದಿಗೆ ಪಾಸಾಗಿರಬೇಕು ಜೊತೆಗೆ ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪಾಸ್ ಆಗಿರಬೇಕು.
ಅಥವಾ
ಎಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ
(ಮೆಕ್ಯಾನಿಕಲ್/ ಎಲೆಕ್ನಿಕಲ್/ಎಲೆಕ್ಟ್ರಾನಿಕ್ಸ್/ಆಟೋಮೊಬೈಲ್/ಕಂಪ್ಯೂಟರ್ ಸೈನ್ಸ್/ಇನ್‌ಸ್ಟ್ರುಮೆಂಟೇಶನ ಟೆಕ್ನಾಲಜಿ/ ಮಾಹಿತಿ ತಂತ್ರಜ್ಞಾನ 50% ಅಂಕಗಳೊಂದಿಗೆ ಪಾಸಾಗಿರಬೇಕು ಮತ್ತು ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪಾಸ್ ಆಗಿರಬೇಕು.

* ದೇಹದಾರ್ಡ್ಯತೆ :
1) ಪುರುಷ ಹಾಗೂ ಮಹಿಳೆ ಎತ್ತರ: 152.5 ಸೆಂ.ಮೀಟರ್ ನಿಗದಿಪಡಿಸಲಾಗಿದೆ..
2) ಪುರುಷ ಹಾಗೂ ಮಹಿಳೆಯರಿಗೆ ಎದೆ ವಿಸ್ತರಣೆಯ
ಕನಿಷ್ಠ 05 ಸೆಂ.ಮೀಟರ್ ಇರಬೇಕು.
(ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಗಮನಿಸಿ)

* ವಯಸ್ಸಿನ ಮಿತಿ :
ಅಭ್ಯರ್ಥಿಗಳು 02 ಜನವರಿ 2004 ಮತ್ತು 02 ಜುಲೈ 2007
ಎರಡೂ ದಿನಗಳನ್ನು ಒಳಗೊಂಡಂತೆ ನಡುವೆ
ಜನಿಸಿದವರು ಮಾತ್ರ ಅರ್ಜಿಸಲ್ಲಿಸಲು
ಅರ್ಹರಾಗಿರುತ್ತಾರೆ.

* ಅರ್ಜಿ ಶುಲ್ಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಪರೀಕ್ಷಾ ಶುಲ್ಕ: ರೂ. 550 + ಜಿಎಸ್‌ಟಿ ಇರುತ್ತದೆ.

* ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮೊದಲು ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್
ಮೂಲಕ ಅರ್ಜಿ ಸಲ್ಲಿಸಬಹುದು.

* ನೇಮಕಾತಿಯ ವಿಧಾನ
1) ಸ್ಪರ್ಧಾತ್ಮಕ ಪರೀಕ್ಷೆ
2) ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆ ಮೂಲಕ ಅಯ್ಕೆ ಮಾಡಲಾಗುತ್ತದೆ.

* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 17 ಜನವರಿ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 06 ಫೆಬ್ರವರಿ 2024

* ಅಧಿಸೂಚನೆ ಕ್ಲಿಕ್ಕಿಸಿ
ವೆಬ್‌ಸೈಟ್
https://agnipathvayu.cdac.in

Leave a Comment