Governmet job-2024 ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ನೇಮಕಾತಿ-2024

ಕೇಂದ್ರ ಸರ್ಕಾರದಿಂದ ಕೇಂದ್ರ ಲೋಕಸೇವಾ ಆಯೋಗ ಇಲಾಖೆ,ವಿಮಾನ ನಿಲ್ದಾಣಗಳ ಪ್ರಾಧಿಕಾರ, ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ,
ಹುದ್ದೆಗಳ ವಿವರ, ಹುದ್ದೆಗಳ ಮಾಹಿತಿ ಮತ್ತು ಇನ್ನಿತರ ಮಾಹಿತಿಯನ್ನು  ಕೆಳಗೆ ಓದಿ.

ಕೇಂದ್ರ ಸರ್ಕಾರದಿಂದ ವಿಮಾನ ನಿಲ್ದಾಣಗಳ ಪ್ರಾಧಿಕಾರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ,
ಹುದ್ದೆಗಳ ವಿವರ, ಹುದ್ದೆಗಳ ಮಾಹಿತಿ ಮತ್ತು ಇನ್ನಿತರ ಮಾಹಿತಿಯನ್ನು ಪಡೆಯಲು ಕೆಳಗೆ ಓದಿ

1 ವಿಮಾನ ನಿಲ್ದಾಣಗಳ ಪ್ರಾಧಿಕಾರ ನೇಮಕಾತಿ

ನೇಮಕಾತಿ ಇಲಾಖೆ ಹೆಸರು : ವಿಮಾನ ನಿಲ್ದಾಣಗಳ ಪ್ರಾಧಿಕಾರ
(Airports Authority of India)
ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ :
1) ಜೂನಿಯರ್ ಅಸಿಸ್ಟೆಂಟ್- 75 ಹುದ್ದೆಗಳು ಖಾಲಿ ಇವೆ.
2) ಸೀನಿಯರ್ ಅಸಿಸ್ಟೆಂಟ್ – 44 ಹುದ್ದೆಗಳು ಖಾಲಿ ಇವೆ.
ಹುದ್ದೆಗಳ ಸಂಖ್ಯೆ : ಒಟ್ಟು 119 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ : ಪದವಿ ಅಥವಾ ಡಿಪ್ಲೊಮಾ ಪಾಸ್ ಆದ ಅಭ್ಯರ್ಥಿ ಅರ್ಜಿ ಹಾಕಬಹುದು.
ಹೆಚ್ಚಿನ ವಿದ್ಯಾರ್ಹತೆಯ ವಿವರಗಳಿಗಾಗಿ ಅಧಿಸೂಚನೆ ನೋಡಿರಿ.

ವಯಸ್ಸಿನ ಮಿತಿ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 – 30 ವರ್ಷ ನಿಗದಿಪಡಿಸಲಾಗಿದೆ.
(ಗಮನಿಸಿ : ಮೀಸಲಾತಿಗನುಗುಣವಾಗಿ ಸಡಿಲಿಕೆ ಇರುತ್ತದೆ ಹಾಗಾಗಿ ಅಧಿಸೂಚನೆ ಗಮನಿಸಿ)

ಅರ್ಜಿ ಶುಲ್ಕ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
1) ಸಾಮಾನ್ಯ ವರ್ಗ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ರೂಪಾಯಿ 1000/- ನಿಗದಿಪಡಿಸಲಾಗಿದೆ.
2) ಎಸ್‌ಸಿ ಮತ್ತು ಎಸ್‌ಟಿ ಹಾಗೂ ಮಹಿಳೆ ಮತ್ತು ಮಾ.ಸೈ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ
ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿ ಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಹುದ್ದೆಗಳಿಗೆ ಸಂಬಂಧಿಸಿದಂತೆ
ಸ್ಕಿಲ್ ಟೆಸ್ಟ್ ನಡೆಸಿ ನೇಮಕಾತಿ ನಿಯಮಾನುಸಾರ ಅಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 27 ಡಿಸೆಂಬರ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಜನವರಿ 2024

ಅಧಿಸೂಚನೆ – ಕ್ಲಿಕ್ ಮಾಡಿರಿ

ವೆಬ್‌ಸೈಟ್ www.aai.aero

 2 ಗುಪ್ತಚರ ಇಲಾಖೆಯ  ನೇಮಕಾತಿ 

ಕೇಂದ್ರ ಸರ್ಕಾರದಿಂದ ಗುಪ್ತಚರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ,
ಹುದ್ದೆಗಳ ವಿವರ, ಹುದ್ದೆಗಳ ಮಾಹಿತಿ ಮತ್ತು ಇನ್ನಿತರ ಮಾಹಿತಿಯನ್ನು ಪಡೆಯಲು ಕೆಳಗೆ ಓದಿ.

ನೇಮಕಾತಿ ಇಲಾಖೆ ಹೆಸರು : ಗುಪ್ತಚರ ಇಲಾಖೆ
ಹುದ್ದೆಯ ಹೆಸರು : ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ
ಹುದ್ದೆಗಳ ಸಂಖ್ಯೆ : ಒಟ್ಟು 226 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಬಿ.ಇ. ಅಥವಾ ಬಿ.ಟೆಕ್ ಅಥವಾ ಸ್ನಾತಕೋತ್ತರ
ಪದವಿ ಸಂಬಂಧಿತ ವಿಭಾಗದಲ್ಲಿ ಪಡೆದಿರಬೇಕು,
ಜೊತೆಗೆ GATE 2021, 2022 ಅಥವಾ 2023ರಲ್ಲಿ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್ ಅಥವಾ ಕಂಪ್ಯೂಟರ್ ಸೈನ್ಸ್
ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಅರ್ಹತಾ ಕಟ್-ಆಫ್ ಅಂಕ ಕಡ್ಡಾಯವಾಗಿ ಪಡೆದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸಿನ ಮಿತಿ :
1) ಸಾಮಾನ್ಯ ವರ್ಗದ ಅಭ್ಯರ್ಥಿ ಅದ್ರೆ 18 – 27 ವರ್ಷ ಇರಬೇಕು.
(ಗಮನಿಸಿ :ಮೀಸಲಾತಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗಿದೆ ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಿ)

ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ನಿಗದಿಪಡಿಸಿದ್ದು
ಸಾಮಾನ್ಯ ವರ್ಗದ ಮತ್ತು ಒಬಿಸಿ ಅಭ್ಯರ್ಥಿಗಳಿಗೆ(ಪುರುಷ) : ರೂಪಾಯಿ 200/- ನಿಗದಿಪಡಿಸಲಾಗಿದೆ.
ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂಪಾಯಿ 100/- ನಿಗದಿಪಡಿಸಲಾಗಿದೆ.
ಈ ಅರ್ಜಿ ಶುಲ್ಕವನ್ನು ಅನ್-ಲೈನ್ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ನೇಮಕಾತಿ ವಿಧಾನ :
ಅರ್ಜಿ ಹಾಕಿದ ಅಭ್ಯರ್ಥಿಗಳನ್ನು ಗೇಟ್ ಸ್ಕೋರ್ ಕಾರ್ಡ್ನ ಆಧಾರದ ಮೇಲೆ 1:10
ಅಭ್ಯರ್ಥಿಗಳ ಪಟ್ಟಿ ಮಾಡಿ ನಂತರ ಸಂದರ್ಶನ ಕರೆಯಲಾಗುತ್ತದೆ.
ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುವುದು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ ಪ್ರವೇಶಿಸಿ
ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು,
ಬೇರೆ ಯಾವುದೇ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 23 ಡಿಸೆಂಬರ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12 ಜನವರಿ 2024

ಅಧಿಸೂಚನೆ : ಕ್ಲಿಕ್ಕಿಸಿ

ಇಲಾಖೆಯ ಅಧಿಕೃತ : ವೆಬ್‌ಸೈಟ್ www.mha.gov.in

ಲೋಕಸೇವಾ ಆಯೋಗ ಇಲಾಖೆಯ ನೇಮಕಾತಿ 

ಕೇಂದ್ರ ಲೋಕಸೇವಾ ಆಯೋಗ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ನಡೆಯಲಿದೆ, ಹುದ್ದೆಗಳ ವಿವರಗಳಿಗೆ ಈ ಕೆಳಗೆ ನೋಡಿ.

ನೇಮಕಾತಿ ಇಲಾಖೆಯ ಹೆಸರು: ಕೇಂದ್ರ ಲೋಕಸೇವಾ ಆಯೋಗ
(ಯುಪಿಎಸ್‌ಸಿ/upsc )
ಹುದ್ದೆಯ ಹೆಸರು : ಕಂಬೈನ್ಸ್ ಡಿಫೆನ್ಸ್ ಸರ್ವೀಸ್
ಹುದ್ದೆಗಳ ಸಂಖ್ಯೆ : ಒಟ್ಟು 457 ಹುದ್ದೆಗಳು ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ ನಡೆಸಲಿದೆ.

ಅರ್ಜಿ ಹಾಕುವ ವಿದ್ಯಾರ್ಹತೆ :
(1) ಐ.ಎಮ್.ಎ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ-
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು
(2) ಭಾರತೀಯ ನೌಕಾ ಅಕಾಡೆಮಿ-
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದಿರಬೇಕು
(3)ಏರ್ ಫೋರ್ಸ್ ಅಕಾಡೆಮಿ-
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಪದವಿ (10+2 ಹಂತದಲ್ಲಿ ಭೌತಶಾಸ್ತ್ರ ಮತ್ತು ಗಣಿತದೊಂದಿಗೆ) ಅಥವಾ ಎಂಜಿನಿಯರಿಂಗ್ ಪದವಿ ಪಡೆದಿರಬೇಕು.

ಗಮನಿಸಿ : ಮಾನದಂಡಗಳ ಪ್ರಕಾರ ದೈಹಿಕವಾಗಿ ಸದೃಢರಾಗಿರಬೇಕು ಅಧಿಸೂಚನೆ ಗಮನಿಸಿ.

ಅಭ್ಯರ್ಥಿಯ ವಯೋಮಿತಿ :
ಅಭ್ಯರ್ಥಿಗಳಿಗೆ 20 ರಿಂದ 24 ವರ್ಷ ನಿಗದಿಪಡಿಸಲಾಗಿದೆ.
ಗಮನಿಸಿ : ಮೀಸಲಾತಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗುವುದು ಅಧಿಸೂಚನೆಯನ್ನು ನೋಡಿ.

ಅರ್ಜಿ ಶುಲ್ಕ
ಸಾಮಾನ್ಯ ವರ್ಗ ಮತ್ತು ಒಬಿಸಿ ಅಭ್ಯರ್ಥಿಗಳಿಗೆ : ರೂಪಾಯಿ 200/- ನಿಗದಿಪಡಿಸಲಾಗಿದೆ.
ಎಸ್‌ಸಿ/ಎಸ್‌ಟಿ/ಮಹಿಳೆ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಇರುತ್ತದೆ.

ನೇಮಕಾತಿ ವಿಧಾನ
1) ಸ್ಪಧಾತ್ಮಕ ಪರೀಕ್ಷೆ ಮತ್ತು
2) ಸಂದರ್ಶನ ಮೂಲಕ ಅಯ್ಕೆ ಮಾಡಲಾಗುತ್ತದೆ.

ಅಭ್ಯರ್ಥಿ ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು, ರೀತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅಜಿ೯ ಸಲ್ಲಿಸಲು ಪ್ರಾರಂಭದ ದಿನಾಂಕ: 20 ಡಿಸೆಂಬರ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09 ಜನವರಿ 2024

ಇಲಾಖೆಯ ಅಧಿಕೃತ ವಿಳಾಸ : www.upsc.gov.in

4 ಕೇಂದ್ರ ಲೋಕಸೇವಾ ಆಯೋಗ ನೇಮಕಾತಿ 

ನೇಮಕಾತಿ ಇಲಾಖೆಯ ಹೆಸರು : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ )
ಹುದ್ದೆಯ ಹೆಸರು :
1) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹುದ್ದೆಗಳು
(National Defence Academy-NDA)
2) ನೌಕಾ ಅಕಾಡೆಮಿ ಹುದ್ದೆಗಳು
(Naval Academy-NA)
ಹುದ್ದೆಗಳ ಸಂಖ್ಯೆ : ಒಟ್ಟು 400 ಹುದ್ದೆಗಳ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ:
2) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು – ದ್ವಿತೀಯ ಪಿಯುಸಿ /10+2 ಪಾಸಾಗಿರಬೇಕು.
2) ನೌಕಾ ಅಕಾಡೆಮಿ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪಿಯುಸಿ (10+2) ವಿದ್ಯಾರ್ಹತೆಯನ್ನು ವಿಜ್ಞಾನ ವಿಭಾಗದಲ್ಲಿ ಗಣಿತ ರಸಾಯನಶಾಸ್ತ್ರ ಮತ್ತು
ಭೌತಶಾಸ್ತ್ರ ವಿಷಯಗಳೊಂದಿಗೆ ಪಾಸಾಗಿರಬೇಕು
ಗಮನಿಸಿ : ದೈಹಿಕ ಮಾನದಂಡಗಳ ಪ್ರಕಾರ ದೈಹಿಕವಾಗಿ ಸದೃಢರಾಗಿರಬೇಕು ಅಧಿಸೂಚನೆ ಗಮನಿಸಿ

ವಯಸ್ಸಿನ ಮಿತಿ:
ಅರ್ಜಿ ಸಲ್ಲಿಸಲು ಇಚ್ಚೆಹಿಸುವ ಅಭ್ಯರ್ಥಿಯು 02 ಜುಲೈ 2005 ರಿಂದ 01 ಜುಲೈ
2008 ದಿನಾಂಕದ ನಡುವೆ ಜನಿಸಿರಬೇಕು

ಆಯ್ಕೆ ಪ್ರಕ್ರಿಯೆ
1) ಸ್ಪರ್ಧಾತ್ಮಕ ಪರೀಕ್ಷೆ ಮತ್ತು
2) ಎಸ್‌ಎಸ್‌ಬಿ ಪರೀಕ್ಷೆ/ಸಂದರ್ಶನ ಮೂಲಕ ಅಭ್ಯರ್ಥಿಗಳ ನೇಮಕ ನಡೆಯಲಿದೆ.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 20 ಡಿಸೆಂಬರ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 09 ಜನವರಿ 2024

ಅಧಿಸೂಚನೆ – ಕ್ಲಿಕ್ ಮಾಡಿರಿ

ಇಲಾಖೆಯ ಅಧಿಕೃತ ವೆಬ್‌ಸೈಟ್ ವಿಳಾಸwww.upsc.gov.in

ದಯವಿಟ್ಟು ಗಮನಿಸಿ : ಅರ್ಜಿ ಸಲ್ಲಿಸುವ ಮುನ್ನಾ ಅಧಿಸೂಚನೆ ಓದಿ,ಅರ್ಥ
ಮಾಡಿಕೊಂಡ ನಂತರವೇ ಅರ್ಜಿ ಸಲ್ಲಿಸಿ.

ಗೆಳೆಯರೆ ನಮಸ್ಕಾರ ಉದ್ಯೋಗ ಮಾಹಿತಿ,ಸರ್ಕಾರಿ ಯೋಜನೆಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಪಡೆಯಲು ನಿಮ್ಮ ksKannada2.com ವೆಬ್ಸೈಟ್ ಅನ್ನು ದಿನಾ ನೋಡುತ್ತಿರಿ ಧನ್ಯವಾದಗಳು…Manju Jyavalli

Leave a Comment