28 ಸಾವಿರ ಸಂಬಳ ಇರುವ ಸರ್ಕಾರಿ ಹುದ್ದೆಗೆ ಅರ್ಜಿ ಹಾಕಿ//government jobs-2023/24

ಎಲ್ಲಾರಿಗೂ ನಮಸ್ಕಾರ..
kskannada2.com ವೆಬ್-ಸೈಟ್ ಗೆ ಅತ್ಮೀಯ ಸ್ವಾಗತ….

ಸ್ನೇಹಿತರೆ…

● ನೇಮಕಾತಿ ಇಲಾಖೆಯ ಹೆಸರು :
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಛೇರಿ ಬಳ್ಳಾರಿ ಜಿಲ್ಲಾ ನ್ಯಾಯಾಂಗ ಘಟಕ
● ಹುದ್ದೆಯ ಹೆಸರು : ಜವಾನ ಹುದ್ದೆಗೆ.
● ಒಟ್ಟು ಹುದ್ದೆಗಳ ಸಂಖ್ಯೆ : 29 ಹುದ್ದೆಗಳು.
● ಅರ್ಜಿ ಸಲ್ಲಿಸುವ ವಿಧ : ಅನ್-ಲೈನ್ ಮೂಲಕ.
● ವೇತನ : ಆಯ್ಕೆಯಾದ ಅಭ್ಯರ್ಥಿಗಳಿಗೆ 17,000-28,950 ರೂ.
ವೇತನ ನಿಗದಿ ಮಾಡಲಾಗಿದೆ.

● ವಯೋಮಿತಿ :
ಅಭ್ಯರ್ಥಿಗಳ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು
ಅಭ್ಯರ್ಥಿಯು ಆಗಿ ಕನಿಷ್ಟ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು.

* ಗರಿಷ್ಠ ವಯೋಮಿತಿ
□ ಸಾಮಾನ್ಯ ವರ್ಗ ಅಭ್ಯರ್ಥಿಗಳಿಗೆ 35 ವರ್ಷ.
□ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ರ ಅಭ್ಯರ್ಥಿಗಳಿಗೆ – 40 ವರ್ಷ
□ ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳು.

● ಅರ್ಜಿ ಶುಲ್ಕ :
□ ಸಾಮಾನ್ಯ ವರ್ಗದ ಅಭ್ಯರ್ಥಿಗಳು, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿಗೆ ಸೇರಿದ
ಅಭ್ಯರ್ಥಿಗಳು 200 ರೂ. ಶುಲ್ಕವನ್ನು ಪಾವತಿ ಮಾಡಬೇಕು.
□ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ
ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.

● ವಿದ್ಯಾರ್ಹತೆ :
□ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವ ತತ್ಸಮಾನ ವಿದ್ಯಾರ್ಹತೆ
ಹೊಂದಿರಬೇಕು.
□ ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು

● ಅಯ್ಕೆ ವಿಧಾನ :
□ ಅಭ್ಯರ್ಥಿಗಳನ್ನು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಡೆದ
ಶೇಕಡಾವಾರು ಅಂಕಗಳ ಆಧಾರದ ಮೇಲೆ 1 ಹುದ್ದೆಗೆ 10 ಅಭ್ಯರ್ಥಿಗಳಂತೆ ಸಂದರ್ಶನಕ್ಕೆ ಕರೆಯಲಾಗುತ್ತದೆ..
□ ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಸೂಚನೆ : ಅಭ್ಯರ್ಥಿಗಳಿಗೆ ಕನ್ನಡ ಓದಲು ಹಾಗೂ ಬರೆಯಲು ಬರುವುದೇ ಎಂಬ
ಪರೀಕ್ಷೆ ನಡೆಸಲಾಗುವುದು,
□ ಪರೀಕ್ಷೆಯಲ್ಲಿ ಅನುತ್ತೀರ್ಣರಾದಲ್ಲಿ ಆಯ್ಕೆಗೆ ಅರ್ಹರಾಗುವುದಿಲ್ಲ.

ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್ ಮೂಲಕ ಸಲ್ಲಿಸಬೇಕು. http://ballari.dcourts.gov.in/notice-category/recruitments/

● ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:
□ ಕೊನೆಯ ದಿನಾಂಕ : 4/1/2024ರ ರಾತ್ರಿ 11.59 ರವರೆಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು,
□ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸಲು ಕಡೆಯ ದಿನಾಂಕ 6/1/2024.

ದಯವಿಟ್ಟು ಗಮನಿಸಿ : ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನಾ
ಸಂಪೂರ್ಣ ಅಧಿಸೂಚನೆ ಓದಿ ನಂತರವೇ ಅರ್ಜಿ ಸಲ್ಲಿಸತಕ್ಕದ್ದು ಇದು ನಮ್ಮ ಕಳಕಳಿಯ ವಿನಂತಿ

ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ, ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ, ವಿವಿಧ ರೀತಿಯ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ…..ಇಂತಿ ನಿಮ್ಮ…..Manju Jyavalli

Leave a Comment