2024 ಈ ಹೊಸ ವರ್ಷವನ್ನ ಆಳಲಿದ್ದಾರೆ ಈ ರಾಶಿಯವರು.! ಇವರದ್ದೇ ನೋಡಿ ಲಕ್ ಅಂದ್ರೆ.!

ಎಲ್ಲಾರಿಗೂ ನಮಸ್ಕಾರ..
kskannada2.com ವೆಬ್-ಸೈಟ್ ಗೆ ಅತ್ಮೀಯ ಸ್ವಾಗತ….

ಜೋತಿಷ್ಯ ಶಾಸ್ತ್ರದಲ್ಲಿ 12 ರಾಶಿಗಳಿಗೆ ಸಂಬಂಧಿಸಿದಂತೆ ಒಂದೊಂದು ಗ್ರಹಗಳು ಬಹಳ
ಮುಖ್ಯವಾಗುತ್ತದೆ. ಹೌದು ಈ 12 ರಾಶಿಗಳಿಗೆ ಒಂದೊಂದು ಗ್ರಹಗಳ ಚಲನೆಯ ಅನುಸಾರ ನಮ್ಮ
ಭವಿಷ್ಯ ನಿರ್ಧಾರವಾಗುತ್ತೆ. 2023 ಮುಗಿದ ನಂತರ 2024ರಲ್ಲಿ ಸಹ ಅನೇಕ ಗ್ರಹಗಳು ತಮ್ಮ ರಾಶಿ ಬದಲಾವಣೆಯನ್ನು ಮಾಡುತ್ತಿದೆ.

2024 ಬಹಳ ವಿಭಿನ್ನವಾದ ಬದಲಾವಣೆಯನ್ನಾ ಕೆಲವು ರಾಶಿ ಚಿಹ್ನೆಯ ಮೇಲೆ ತರುತ್ತದೆ.

2024 ರ ಆರಂಭದಲ್ಲಿಯೇ ಅದೃಷ್ಟ ಗ್ರಹವಾದ ಗುರುವು ಹಿಮ್ಮುಖ ಚಲನೆಯನ್ನಾ
ನಿಲ್ಲಿಸಲಿದ್ದಾನೆ, ಹೌದು ಗರುವು ತನ್ನ ಹಿಮ್ಮುಖ ಚಲನೆಯನ್ನು ನಿಲ್ಲಿಸಿ ನೇರ ಸಂಚಾರ
ಆರಂಭ ಮಾಡುತ್ತಿದ್ದಾನೆ. ಈ ಗುರುವಿನ ನೇರ ಸಂಚಾರದಿಂದ ಕೆಲವು ರಾಶಿಯವರ
ಬದುಕನ್ನೆ ಬೆಳಗಿಸಲಿದೆ ಅಂತಾನೇ ಹೇಳಬಹುದು. ಹಾಘೆಯೇ, ಬುಧ ಗ್ರಹವು ಇದೇ
ಜನವರಿ- 1- 2024 ರಂದು ಧನುಷ್ಯ ರಾಶಿಯಲ್ಲಿ ತನ್ನ ಹಿಮ್ಮುಖ ಚಲನೆಯನ್ನ
ನಿಲ್ಲಿಸುತ್ತದೆ.ಇದರಿಂದ ಸಹ ಕೆಲವು ರಾಶಿಗಳು ಅನೇಕ ಪ್ರಯೋಜನಗಳನ್ನಾ ಪಡೆಯುತ್ತಾರೆ.

ಹೌದು ಬುಧ ಮತ್ತು ಗುರು ಗ್ರಹಗಳ ಜೊತೆ ಸೂರ್ಯ ಸಹ ತನ್ನ ರಾಶಿಯನ್ನು ಬದಲಾವಣೆ
ಮಾಡಲಿದ್ದಾನೆ.. ಈ 3 ಗ್ರಹಗಳ ಸಂಚಾರ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಆದರೆ ಬಹಳ ಮುಖ್ಯವಾಗಿ ಈ ರಾಶಿಯವರ ಮೇಲೆ ಸುಖ,ಶಾಂತಿ,ನೆಮ್ಮದಿ ಜೊತೆಗೆ
ಅದೃಷ್ಟದ ಹೊಳೆ ಹರಿಯಲಿದೆ ಹೌದು ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ ನೋಡಿ…

ಮೊದಲಿಗೆ ಮಕರ ರಾಶಿ :
ಈ ರಾಶಿಗೆ ಹಲವು ರೀತಿಯಲ್ಲಿ ಅದೃಷ್ಟವನ್ನ 2024ರಲ್ಲಿ ಗುರು ಗ್ರಹವು ನೀಡುತ್ತದೆ.
2024 ಜನವರಿ 20ರಂದು ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಕೊನೆಯಾಗುತ್ತದೆ.
ನಿಮ್ಮ ಜೀವನದಲ್ಲಿ, ಕುಟುಂಬದಲ್ಲಿ, ಸಾರ್ವಜನಿಕವಾಗಿ ಅನೇಕ ಅನೇಕಾ ಬದಲಾವಣೆಗಳಾಗುತ್ತದೆ.
ಹೊಸ ಹೊಸ ಸಾಹಸಗಳಿಂದ ನಿಮ್ಮಲ್ಲಿ ಉತ್ಸಾಹ ಹೆಚ್ಚಾಗುತ್ತದೆ. 2024ರ ಮೇ ತಿಂಗಳಲ್ಲಿ,
ಶುಕ್ರ ಗ್ರಹವು ವೃಷಭ ರಾಶಿಯಲ್ಲಿ ಗುರು ಗ್ರಹದ ಜೊತೆಗೆ ಸಂಯೋಗವಾಗುತ್ತದೆ,
ಈ ಸಂಯೋಗದಿಂದ ನಿಮ್ಮ ಜೀವನದಲ್ಲಿ ಅದೃಷ್ಟದ ಸಮೃದ್ಧಿ ತರುತ್ತದೆ.
ವಿಶೇಷವಾಗಿ ಮಹಿಳೆಯರು ಇದರ ಲಾಭ ಪಡೆಯಲಿದ್ದಾರೆ. ನೀವು ವಿದ್ಯಾರ್ಥಿಗಳಾಗಿದ್ದರೆ
ಹೊಸದಾಗಿ ಏನನ್ನಾದರೂ ಕಲಿಯಲು ಪ್ರಯತ್ನಿಸಿ ಗುರುವಿನ ಅಶಿರ್ವಾದ ಇದೆ.

ಎರಡನೇಯದ್ದು ಮೇಷ ರಾಶಿ:
ಈ ರಾಶಿಯವರು 2024 ಅನ್ನು ತಮಗಾಗಿನ ಮೀಸಲಿಡುವುದು ಬಹಳ ಅಗತ್ಯ
ಯಾಕೆಂದರೆ ನಿಮಗೆ ಈ ವರ್ಷ ಅವಕಾಶಗಳನ್ನ ನೀಡುತ್ತದೆ, ಈ ಸಮಯದಲ್ಲಿ ನೀವು
ಬಹಳಷ್ಟು ಸಾಧನೆ ಮಾಡುವ ಸಾಧ್ಯತೆ ಇದೆ.ಕುಟುಂಬದಲ್ಲಿ, ಸಮಾಜದಲ್ಲಿ, ಕೆಲಸ
ಮಾಡುವ ಕಡೆ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ..2024ರ ಮಾರ್ಚ್ ಮತ್ತು ಏಪ್ರಿಲ್‌
ತಿಂಗಳಿನಲ್ಲಿ ನಿಮ್ಮ ಜೀವನದಲ್ಲಿ ಹೊಸತನ ಆರಂಭ ಆಗಲಿದೆ.

ನೀವು ನಿರೀಕ್ಷೆಮಾಡದಂತಹ ಆರ್ಥಿಕ ಲಾಭಗಳನ್ನು ಗುರು ಗ್ರಹವು ತಂದು ಕೊಡಲಿದೆ.

ನಿಮ್ಮ ವ್ಯಾಪಾರ ಸ್ಥಳದಲ್ಲಿ ಅಥವಾ ಹಣದ ವ್ಯಾವಹಾರ ಮಾಡುವ ಸ್ಥಳದಲ್ಲಿ ಶುಕ್ರ ಗ್ರಹವು ಗುರು ಗ್ರಹವನ್ನುಸಂಯೋಗ ಮಾಡುವುದರಿಂದ ಅದೃಷ್ಟವು

ನಿಮ್ಮ ಕಡೆ ಇರುತ್ತದೆ.ಈ ಸಮಯದಲ್ಲಿ ಮಹಿಳಾ ವ್ಯಾಪರಿಗಳು ಉತ್ತಮ ಆದಾಯವನ್ನು ಸಹ ಪಡೆಯಬಹುದು.ಉತ್ತಮವಾದ ಆರೋಗ್ಯ ಇರುತ್ತದೆ.

ಮಕ್ಕಳು ಉತ್ತಮವಾದ ವಿದ್ಯಾಭ್ಯಾಸ ಮಾಡಲಿದ್ದಾರೆ.

ಮೂರನೇಯದ್ದು ಕನ್ಯಾರಾಶಿ:
ಈ ರಾಶಿಯವರಿಗೆ 2024 ಬಹಳ ಒಳ್ಳೆಯ ವರ್ಷ ಅಗಿರುತ್ತದೆ. 2024ರ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ,
ಚಂದ್ರ ಮತ್ತು ಸೂರ್ಯಗ್ರಹಣಗಳು ಈ ರಾಶಿಯ ಜನರಿಗೆ ಹೊಸ ಹೊಸ ಉತ್ಸಾಹ ನೀಡುತ್ತದೆ.
ಗುರು ಗ್ರಹವು ಈ ವರ್ಷ ಅಂದರೆ 2024ರಲ್ಲಿ ಅದೃಷ್ಟ ಮತ್ತು ಬೆಳವಣಿಗೆಗೆ
ಅವಕಾಶಗಳನ್ನು ನೀಡುತ್ತದೆ ಹಾಗಾಗಿ ಮಹಿಳೆಯರು ಆಗಿರಲಿ ಪುರುಷರು, ವೃದ್ದರು,
ಮಕ್ಕಳು ಆಗಿರಲಿ ಬಂದ ಅವಕಾಶಗನ್ನು ಸರಿಯಾಗಿ ಅವಲೋಕನ ಮಾಡಿ ಸದುಪಯೋಗ ಮಾಡಿಕೊಳ್ಳಿ.
2024 ನಿಮ್ಮ ಜೀವನಕ್ಕೆ ಸಾಹಸ, ಕಲಿಕೆ ಮತ್ತು ಸ್ವಯಂ ಅನ್ವೇಷಣೆ ಹೀಗೆ ಬಹಳ ವಿಭಿನ್ನವಾಗಿರುತ್ತದೆ.
ಹಣದ ವ್ಯಾವಹರ ಮಾಡುವವರು, ವ್ಯಾಪಾರ ಮಾಡುವವರು ಸ್ವಲ್ಪ ಈ ವರ್ಷದಲ್ಲಿ
ಪ್ರಯತ್ನ ಮಾಡುವುದು ಉತ್ತಮ ಈ ಪ್ರಯತ್ನಗಳಿಂದ ನಿಮ್ಮ ಅದಾಯ ಹೆಚ್ಚಾಗುತ್ತದೆ.

ನಾಲ್ಕನೇಯದ್ದು ವೃಷಭ ರಾಶಿ:
ವೃಷಭ ರಾಶಿಯವರಿಗೆ 2024 ರಲ್ಲಿ ಮಹತ್ವಾಕಾಂಕ್ಷೆಗಳ ವರ್ಷವಾಗಿರುತ್ತೆ ಅನ್ನೋದಕ್ಕೆ
ಸಂಶಯವೇ ಇಲ್ಲಾ ಯಾಕೆಂದರೆ ನಿಮ್ಮ ವೃತ್ತಿಜೀವನದ ಮೇಲೆ ಈ ವರ್ಷ ದೊಡ್ಡ ಪರಿಣಾಮವನ್ನು ಬೀರುತ್ತದೆ.
ಈ ರಾಶಿಯ ಜನರು ಈ ವರ್ಷ ಮಾಡುವ ಕೆಲಸಗಳ ಮೇಲೆ ಗಮನ ನೀಡಬೇಕಾಗುತ್ತದೆ
ಯಾಕೆಂದರೆ ಸ್ವಲ್ಪ ಅಲಕ್ಷ್ಯ ಮಾಡಿದ್ರು ನಿಮ್ಮ ಜೀವನಕ್ಕೆ ಪ್ರಮಾದಕರವಾಗಿರುತ್ತದೆ.
ಇದೇ 2024ರ ಮಾರ್ಚ್‌ ತಿಂಗಳಿನಲ್ಲಿ ಚಂದ್ರ ಗ್ರಹಣ ನಡೆಯಲಿದೆ ಈ ಚಂದ್ರಗ್ರಹಣದ
ಸಮಯದಲ್ಲಿ, ನಿಮ್ಮ ಶಕ್ತಿ, ಮತ್ತು ನಿಮ್ಮ ಪೂರ್ಣವಾದ ಸಾಮರ್ಥ್ಯ, ದಕ್ಷತೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ.
2024ರ ಮೇ ನಲ್ಲಿ ಗುರು ಗ್ರಹವು ನಿಮ್ಮ ಆರ್ಥಿಕ ಶಕ್ತಿಯನ್ನಾ ಹೆಚ್ಚು ಮಾಡುತ್ತಾನೆ ಇದರಿಂದ
ನಿಮ್ಮ ಅರ್ಥಿಕ ಜೀವನದ ಮೇ ಬಹಳ ಒಳ್ಳೆಯ ಪರಿಣಾಮ ಬೀರುತ್ತದೆ.
ಮಹಿಳೆಯರು ಯಾವುದೇ ಕೆಲಸ ಕಾರ್ಯಗಳನ್ನು ಮಾಡುವಾಗ ನಿಮ್ಮ ಸಂಪೂರ್ಣ ಬುದ್ದಿ
ಶಕ್ತಿಯನ್ನು ಉಪಯೋಗಿಸಿ ಇದರಿಂದ ನಿಮ್ಮ ವೈಯಕ್ತಿಕ ಜೀವನ ಉತ್ತಮವಾಗಿ ಇರುತ್ತದೆ..

ಸ್ನೇಹಿತರೆ ಇದೆ ತರಹದ ಇನ್ನೂ ಅನೇಕ ರಾಶಿ ಭವಿಷ್ಯ,ಉದ್ಯೋಗ ಮಾಹಿತಿ,ರಾಜಕೀಯ ಮಾಹಿತಿ,
ಸರ್ಕಾರಿ ಯೋಜನೆಗಳ ಮಾಹಿತಿ,ಶಿಕ್ಷಣ, ವಿವಿಧ ರೀತಿಯ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ..ಧನ್ಯವಾದಗಳು

ಗಮನಿಸಿ : ದೇವರು ಇದ್ದಾರೆ ಏನ್ನುವವರಿಗೆ ಇದ್ದಾನೆ ಇಲ್ಲಾ ಅನ್ನುವವರಿಗೆ ಇಲ್ಲಾ. ನಂಬಿಕೆ ಅನ್ನುವುದು ಅವರವರಿಗೆ ಬಿಟ್ಟಿದ್ದು…

Leave a Comment