10ನೇ ತರಗತಿ ಮತ್ತು ಡಿಗ್ರಿ ಪಾಸ್ ಆದವರಿಗೆ ಗುಡ್ ನ್ಯೂಸ್/ ಕೇಂದ್ರ ಸರ್ಕಾರಿ ಉದ್ಯೋಗ-2023/24

ನಮಸ್ಕಾರ kskannada2.com ವೆಬ್ಸೈಟ್ ಗೆ ಸ್ವಾಗತ.
ಗೆಳೆಯರೆ ಕೇಂದ್ರ ಸರ್ಕಾರದ ಉದ್ಯೋಗ ಇದಾಗಿದ್ದು ಗುಪ್ತಚರ ಇಲಾಖೆ ಮತ್ತು ಸಿಬ್ಬಂದಿ
ನೇಮಕಾತಿ ಅಯೋಗವು ವಿವಿಧ ಹುದ್ದೆಗಳಿಗೆ ಅರ್ಜಿ ಕರೆದಿದ್ದಾರೆ, ಹುದ್ದೆಗಳ ವಿವರ ಮತ್ತು
ಇನ್ನಿತರ ಮಾಹಿತಿಗಳನ್ನು ಪಡೆಯಲು ಈ ಲೇಖನವನ್ನು ಪೂರ್ತಿಯಾಗಿ ನೋಡಿ.

ಮೋದಲಿಗೆ ಗುಪ್ತಚರ ಇಲಾಖೆಯ ಹುದ್ದೆಗಳ ವಿವರ

ನೇಮಕಾತಿ ಇಲಾಖೆಯ ಹೆಸರು : ಗುಪ್ತಚರ ಇಲಾಖೆ
ಹುದ್ದೆಯ ಹೆಸರು : ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ
ಹುದ್ದೆಗಳ ಸಂಖ್ಯೆ : ಒಟ್ಟು 226 ಹುದ್ದೆಗಳು

ವಿದ್ಯಾರ್ಹತೆ:
ಅಭ್ಯರ್ಥಿಯು ಬಿ.ಇ. ಅಥವಾ ಬಿ.ಟೆಕ್ ಅಥವಾ ಸ್ನಾತಕೋತ್ತರ ಪದವಿ ಸಂಬಂಧಿತ ವಿಭಾಗದಲ್ಲಿ ಪಡೆದಿರಬೇಕು, ಜೊತೆಗೆ GATE 2021, 2022 ಅಥವಾ 2023ರಲ್ಲಿ ಎಲೆಕ್ಟ್ರಾನಿಕ್ಸ್
ಕಮ್ಯುನಿಕೇಷನ್ ಅಥವಾ ಕಂಪ್ಯೂಟರ್ ಸೈನ್ಸ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಅರ್ಹತಾ ಕಟ್-ಆಫ್ ಅಂಕ ಪಡೆದಿರಬೇಕು.

ವಯೋಮಿತಿ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 27 ವರ್ಷ ನಿಗದಿಪಡಿಸಲಾಗಿದೆ.
(ಗೆಳೆಯರೆ – ಮೀಸಲಾತಿಗೆ ಅನುಗುಣವಾಗಿ ಸಡಿಲಿಕೆ ನೀಡಲಾಗುವುದು)

ಅರ್ಜಿ ಶುಲ್ಕ
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ(ಪುರುಷ ಅಭ್ಯರ್ಥಿಗೆ ) : ರೂಪಾಯಿ
200/- ನಿಗದಿಪಡಿಸಲಾಗಿದೆ.
ಇನ್ನೂ ಎಲ್ಲಾ ಇತರ ಅಭ್ಯರ್ಥಿಗಳಿಗೆ ರೂಪಾಯಿ 100/- ನಿಗದಿಪಡಿಸಲಾಗಿದೆ.

ನೇಮಕಾತಿ ವಿಧಾನ
ಅಭ್ಯರ್ಥಿಗಳಿಗೆ ಗೇಟ್ ಸ್ಕೋರ್ ಕಾರ್ಡ್ನ ಆಧಾರದ ಮೇಲೆ 1:10 ಅಭ್ಯರ್ಥಿಗಳ ಪಟ್ಟಿ ಮಾಡಿ
ನಂತರ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ವೆಬ್‌ಸೈಟ್‌ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 23 ಡಿಸೆಂಬರ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 12 ಜನವರಿ 2024

ಅಧಿಸೂಚನೆ : ಕ್ಲಿಕ್ಕಿಸಿ

ವೆಬ್‌ಸೈಟ್ www.mha.gov.in

ಎರಡನೆಯದಾಗಿ ಸಿಬ್ಬಂದಿ ನೇಮಕಾತಿ ಆಯೋಗದ ಹುದ್ದೆಗಳ ವಿವರ.

ನೇಮಕಾತಿ ಇಲಾಖೆಯ ಹೆಸರು : ಸಿಬ್ಬಂದಿ ನೇಮಕಾತಿ ಆಯೋಗ
(Staff Selection Commission-SSC)
ಹುದ್ದೆಯ ಹೆಸರು : ಕಾನ್ಸ್ಟೇಬಲ್ ಹುದ್ದೆಗಳು
(SSC Constable GD Male & Female)
ಹುದ್ದೆಗಳ ಸಂಖ್ಯೆ : ಒಟ್ಟು 26146 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ವಿದ್ಯಾರ್ಹತೆ:
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು sslc/10 ನೇ ತರಗತಿ ಪಾಸಾಗಿರಬೇಕು.

ದೈಹಿಕ ಮಾನದಂಡಗಳ ವಿವರ:
1) ಎತ್ತರ : ಪುರುಷ ಅಭ್ಯರ್ಥಿಗಳಿಗೆ: 170 ಸೆಂ. ಮಹಿಳೆ ಅಭ್ಯರ್ಥಿಗಳಿಗೆ: 157 ಸೆಂ.
2) ಎದೆ ಸುತ್ತಳತೆ: ಪುರುಷ ಅಭ್ಯರ್ಥಿಗಳಿಗೆ ಮಾತ್ರ
80 ಸೆಂ.ಮೀ-ಕನಿಷ್ಠ ವಿಸ್ತರಣೆ 5 ಸೆಂ.ಮೀ
(ಗಮನಿಸಿ : ಮೀಸಲಾತಿ ನಿಯಮಗಳ ಪ್ರಕಾರ ಸಡಿಲಿಕೆ ಇರುತ್ತದೆ ಅಧಿಸೂಚನೆ ಗಮನಿಸಿ.)

ವಯೋಮಿತಿ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 23 ವರ್ಷ ನಿಗದಿಪಡಿಸಲಾಗಿದೆ.
ವಯೋ ಸಡಿಲಿಕೆ :
ಒ.ಬಿ.ಸಿ ಅಭ್ಯರ್ಥಿಗಳಿಗೆ 03 ವರ್ಷ ವಯೋ ಸಡಿಲಿಕೆ ಇರುತ್ತದೆ.
ಎಸ್.ಸಿ/ ಎಸ್.ಟಿ ಅಭ್ಯರ್ಥಿಗಳಿಗೆ 05 ವರ್ಷ ವಯೋ ಸಡಿಲಿಕೆ ಇರುತ್ತದೆ.
(ಗಮನಿಸಿ : ಮೀಸಲಾತಿ ನಿಯಮಗಳ ಪ್ರಕಾರ ಸಡಿಲಿಕೆ ನೀಡಲಾಗುವುದು ಅಧಿಸೂಚನೆ ಓದಿ.)

ಅರ್ಜಿ ಶುಲ್ಕ
ಸಾಮಾನ್ಯ ವರ್ಗ /ಒಬಿಸಿ ಅಭ್ಯರ್ಥಿಗಳಿಗೆ: ರೂಪಾಯಿ 100/- ನಿಗದಿಪಡಿಸಲಾಗಿದೆ.
ಮಹಿಳೆ, ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.

ನೇಮಕಾತಿ ವಿಧಾನ :
ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು
ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯನ್ನು ಒಳಗೊಂಡಿರುತ್ತದೆ,
ಈ ರೀತಿಯಾಗಿ ಅಭ್ಯರ್ಥಿಗಳ ಅಯ್ಕೆ ನಡೆಯುತ್ತದೆ.

ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು,
ಬೇರೆ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 24 ನವೆಂಬರ್ 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಡಿಸೆಂಬರ್ 2023

ಅಧಿಸೂಚನೆ – ಕ್ಲಿಕ್ ಮಾಡಿರಿ

ವೆಬ್‌ಸೈಟ್ https://ssc.nic.in

ಈ ಗುಪ್ತಚರ ಇಲಾಖೆಗೆ ಮತ್ತು ಸಿಬ್ಬಂದಿ
ನೇಮಕಾತಿ ಅಯೋಗ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ
ಸ್ಪಷ್ಟವಾಗಿ ಅರ್ಥೈಸಿಕೊಂಡ ನಂತರವೇ ಅರ್ಜಿ ಸಲ್ಲಿಸತಕ್ಕದ್ದು.

ಗೆಳೆಯರೆ ಇದೇ ರೀತಿಯಲ್ಲಿ ಉಚಿತವಾಗಿ ವಿವಿಧ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಬೆಂಬಲಿಸಿ : Manju Jyavalli.

Leave a Comment