ರಾಜ್ಯದ 4 ಜಿಲ್ಲೆಗಳಲ್ಲಿ ಖಾಲಿ ಹುದ್ದೆಗಳು!10ನೇ-ಪಿಯುಸಿ-ಡಿಪ್ಲೊಮಾ ಪಾಸ್ ಆದವರಿಗೆ ಭರ್ಜರಿ ಗುಡ್ ನ್ಯೂಸ್!

ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್! ಸರ್ಕಾರಿ ಉದ್ಯೋಗ ಬಯಸುವ ಸುವರ್ಣ ಅವಕಾಶ ಹೌದು 10ನೇ ತರಗತಿ, ದ್ವಿತೀಯ ಪಿಯುಸಿ, ಪಾಸ್ ಆದವರಿಗೆ ಒಳ್ಳೆಯ ಅವಕಾಶ ಇದೆ.

ಹೌದು ರಾಜ್ಯದಲ್ಲಿ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಜಿಲ್ಲಾ ನ್ಯಾಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.ಶಿವಮೊಗ್ಗ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ, ಬಳ್ಳಾರಿ ಜಿಲ್ಲೆ, ರಾಮನಗರ ಜಿಲ್ಲೆಗಳಲ್ಲಿ ಈ ಹುದ್ದೆಗಳ ನೇಮಕಾತಿ ನಡೆಯುತ್ತಿದ್ದು, ಈ ಹುದ್ದೆಗಳ ಮಾಹಿತಿ,ಹುದ್ದೆಗಳ ವಿವರ,ಹುದ್ದೆಗಳ ಸಂಖ್ಯೆ, ವಯೋಮಿತಿ, ಅರ್ಜಿ ಶುಲ್ಕ,ವೇತನದ ವಿವರ ಮತ್ತು ಇನ್ನಿತರ ಮಾಹಿತಿಗಳನ್ನು ಪಡೆಯಲು ಈ ಲೇಖನವನ್ನು ಕೊನೆತನಕ ಓದಿ ಅರ್ಥ ಮಾಡಿಕೊಂಡು ನಂತರ ಅರ್ಜಿ ಹಾಕಿ.

ನೇಮಕಾತಿ ಇಲಾಖೆ ಹೆಸರು : ಜಿಲ್ಲಾ ನ್ಯಾಯಾಲಯ

ಉದ್ಯೋಗ ಸ್ಥಳ :ಶಿವಮೊಗ್ಗ, ರಾಮನಗರ, ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆ.

ಶಿವಮೊಗ್ಗ ಜಿಲ್ಲೆಯ ಹುದ್ದೆಗಳ ವಿವರ :
1) ಜವಾನರು 28 ಹುದ್ದೆಗಳು
2) ಪ್ರೋಸೆಸ್ ಜಾರಿಕಾರ 05
ಒಟ್ಟು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ 33 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ

ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದ ಹುದ್ದೆಗಳ ವಿವರ
1) ಜವಾನರು 05 ಹುದ್ದೆಗಳು
2) ಆದೇಶ ಜಾರಿಕಾರರು 11
3) ಶೀಘ್ರಲಿಪಿಗಾರ 08
4) ಬೆರಳಚ್ಚುಗಾರ 14
5) ಬೆರಳಚ್ಚು ನಕಲುಗಾರರು 06 ಹುದ್ದೆ
6) ಚಾಲಕ 1 ಹುದ್ದೆ.
ಒಟ್ಟು ಚಿಕ್ಕಬಳ್ಳಾಪುರ ಜಿಲ್ಲಾ ನ್ಯಾಯಾಲಯದಲ್ಲಿ 55 ಹುದ್ದೆಗಳ ನೇಮಕಾತಿ ನಡೆಯಲಿದೆ.

ಬಳ್ಳಾರಿ ಜಿಲ್ಲಾ ನ್ಯಾಯಾಲಯ ಹುದ್ದೆಗಳ ವಿವರ :
1) ಜವಾನ ಹುದ್ದೆ
ಹುದ್ದೆಗಳ ಸಂಖ್ಯೆ : ಒಟ್ಟು 31 ಹುದ್ದೆಗಳು
(ಹೈದರಾಬಾದ್ ಕರ್ನಾಟಕ 29 ಹುದ್ದೆಗಳು ಮತ್ತು ಉಳಿಕೆ 02 ಹುದ್ದೆಗಳು)

ರಾಮನಗರ ನ್ಯಾಯಾಲಯ ಹುದ್ದೆಗಳ ವಿವರ
1) ಶೀಘ್ರಲಿಪಿಗಾರ 03 ಹುದ್ದೆಗಳು
2) ಬೆರಳಚ್ಚುಗಾರ 02 ಹುದ್ದೆಗಳು
3) ಬೆರಳಚ್ಚು ನಕಲುಗಾರರು 01 ಹುದ್ದೆ
ರಾಮನಗರ ಜಿಲ್ಲಾ ನ್ಯಾಯಲಯದಲ್ಲಿ 06 ಹುದ್ದೆಗಳ ನೇಮಕಾತಿ ನಡೆಯಲಿದೆ‌.

ವಯಸ್ಸಿನ ಮಿತಿ :
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 – 35 ವರ್ಷ ನಿಗದಿಪಡಿಸಲಾಗಿದೆ.
(ಗಮನಿಸಿ : ಸರ್ಕಾರದ ನಿಯಮಗಳ ಪ್ರಕಾರ ಮಿಸಲಾತಿಗೆ ಅನುಗುಣವಾಗಿ ಸಡಿಲಿಕೆ ಅಧಿಸೂಚನೆ ಗಮನಿಸಿ)

ಅರ್ಜಿ ಶುಲ್ಕ
2) ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮತ್ತು2a/2b/3a/3b ರೂ. 200/- ನಿಗದಿಪಡಿಸಲಾಗಿದೆ.
1) sc/st/c1/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ
ವಿನಾಯಿತಿಯನ್ನು ನೀಡಲಾಗಿದೆ.

ವಿದ್ಯಾರ್ಹತೆ :
1) ಜವಾನರು ಹುದ್ದೆ : 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಕನ್ನಡ ಓದಲು ಬರೆಯಲು ತಿಳಿದಿರಬೇಕು
2) ಪ್ರೋಸೆಸ್ ಜಾರಿಕಾರ ಹುದ್ದೆಗಳು : ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು,
ವಾಹನ ಚಾಲನೆಯ ಲೈಸನ್ಸ್ ಇರುವವರಿಗೆ ಆದ್ಯತೆ ನೀಡಲಾಗುವುದು.
3) ಆದೇಶ ಜಾರಿಕಾರರು ಹಾಗೂ ಚಾಲಕ ಹುದ್ದೆಗಳಿಗೆ : ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು,
ಲಘು ವಾಹನ ಚಾಲನಾ ಪರವಾನಿಗೆ ಇರುವವರಿಗೆ ಆದ್ಯತೆ ನೀಡಲಾಗುವುದು
4) ಶೀಘ್ರಲಿಪಿಗಾರ ಹುದ್ದೆಗಳು : ದ್ವಿತೀಯ ಪಿಯುಸಿ ಪಾಸಾಗಿರಬೇಕು
ಮತ್ತು ಕನ್ನಡ-ಇಂಗ್ಲೀಷ್ ಟೈಪಿಂಗ್ ಹಾಗೂ ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ ಪಾಸಾಗಿರಬೇಕು/ತತ್ಸಮಾನ
5) ಬೆರಳಚ್ಚುಗಾರ ಹುದ್ದೆಗಳು : ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು ಪ್ರೌಢ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು
ಅಥವಾ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟಿಸ್ ಪರೀಕ್ಷೆ ಪಾಸಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರ ಬೇಕು.
6) ಬೆರಳಚ್ಚು ನಕಲುಗಾರರು ಹುದ್ದೆ : ದ್ವಿತೀಯ ಪಿಯುಸಿ ಮತ್ತು ಕನ್ನಡ, ಇಂಗ್ಲೀಷ್ ಬೆರಳಚ್ಚು ಕಿರಿಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು
ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ : ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಹತಾ ಪರೀಕ್ಷೆ /
ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುತ್ತದೆ.(ಅಧಿಸೂಚನೆ ಗಮನಿಸಿ)

ಅರ್ಜಿ ಸಲ್ಲಿಸುವ ವಿಧಾನ :
ವೆಬ್‌ಸೈಟ್ ಪ್ರವೇಶಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ರಾಮನಗರ ಜಿಲ್ಲೆ : 22 ಜನವರಿ 2024
ಬಳ್ಳಾರಿ ಜಿಲ್ಲೆ : 04/01/2024
ಶಿವಮೊಗ್ಗ ಜಿಲ್ಲೆ : 16/01/204
ಚಿಕ್ಕಬಳ್ಳಾಪುರ ಜಿಲ್ಲೆ : 17/04/2023

ರಾಮನಗರ ಜಿಲ್ಲೆ ವೆಬ್‌ಸೈಟ್ :
https://ramanagara.dcourts.gov.in

ಚಿಕ್ಕಬಳ್ಳಾಪುರ ಜಿಲ್ಲೆ ವೆಬ್‌ಸೈಟ್ :
https://chikkaballapur.dcourts.gov.in

ರಾಮನಗರ ಜಿಲ್ಲೆ ವೆಬ್‌ಸೈಟ್ :
https://ballari.dcourts.gov.in

ರಾಮನಗರ ಜಿಲ್ಲೆ ವೆಬ್‌ಸೈಟ್ :
https://shivamogga.dcourts.gov.in

ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣ ಅಧಿಸೂಚನೆ ಓದಿ,

ಗಮನಿಸಿ : ಅರ್ಜಿ ಸಲ್ಲಿಸು ಅಭ್ಯರ್ಥಿಗಳು ಸರಿಯಾಗಿ ಓದಿ ಅರ್ಥೈಸಿಕೊಂಡು ನಂತರ ಅರ್ಜಿ ಹಾಕಿ.

ಗೆಳೆಯರೆ ನಮಸ್ಕಾರ ಉದ್ಯೋಗ ಮಾಹಿತಿ,ಸರ್ಕಾರಿ ಯೋಜನೆಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಪಡೆಯಲು ನಿಮ್ಮ ksKannada2.com ವೆಬ್ಸೈಟ್ ಅನ್ನು ದಿನಾ ನೋಡುತ್ತಿರಿ ಧನ್ಯವಾದಗಳು…Manju Jyavalli

Leave a Comment