ಯುವನಿಧಿ ಸ್ಕೀಮ್// ಕಾಂಗ್ರೆಸ್​ ಸರ್ಕಾರದ ಐದನೇ ಗ್ಯಾರಂಟಿ ಜಾರಿಗೆ ದಿನಾಂಕ ಫಿಕ್ಸ್​​; 5 ಲಕ್ಷ ಪದವೀಧರರಿಗೆ ಹಣ! Yuva Nidhi Scheme

ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆ ಜಾರಿಗೆ ದಿನಾಂಕ ಫಿಕ್ಸ್​ ಆಗಿದೆ…

ಹೌದು ಯುವ ನಿಧಿ ಯೋಜನೆಗೆ ಜನವರಿಯಿಂದ ಚಾಲನೆ ನೀಡಲಾಗುತ್ತದೆ ಎಂದು ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ ..ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 21 ರಿಂದ ಅವಕಾಶ ಕಲ್ಪಿಸಲಾಗುತ್ತದೆ ಎಂಬ ಮಾಹಿತಿಯನ್ನು
ಡಾ. ಶರಣ್ ಪ್ರಕಾಶ್ ಪಾಟೀಲ್ ಹಂಚಿಕೊಂಡಿದ್ದಾರೆ…

ಯುವನಿಧಿ ಯೋಜನೆ ಜಾರಿಗೆ ಬಂದರೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಐದನೇ ಗ್ಯಾರಂಟಿ ಜಾರಿಗೋಳಿಸಿದಂತಾಗುತ್ತದೆ.ಸಚಿವರದಂತಹ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ಜನವರಿಯಲ್ಲಿ ಯೋಜನೆಗೆ ಅಧಿಕೃತ ವಾಗಿ ಚಾಲನೆ ನೀಡಲಾಗುವುದು ಅಂದರೆ ಡಿಸೆಂಬರ್ 21 ಅರ್ಜಿ ಸ್ವೀಕರಿಸಿ ಜನರಿಗೆ ಎಲ್ಲಾ ಫಲಾನುಭವಿಗಳಿಗೆ ಹಣ ವರ್ಗಾವಣೆ ಮಾಡುತ್ತೆವೆ ಎಂದಿದ್ದಾರೆ…ಈ ಯೋಜನೆ ಯಿಂದ 5 ಲಕ್ಷ ಪದವೀಧರರ ಖಾತೆಗೆ ಹಣ ತಲುಪಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಗಮನಿಸಿ : ರಾಜ್ಯ ಸರ್ಕಾರದ ಐದನೇ ಗ್ಯಾರಂಟಿಯಾದ ಯುವನಿಧಿ ಯೋಜನೆಗೆ 2023ರಲ್ಲಿ ತೇರ್ಗಡೆಯಾದ ಪದವೀಧರರಿಗೆ 180 ದಿನಗಳು ಕಳೆದರು ಕೂಡಾ ಅವರಿಗೆ ಉದ್ಯೋಗ/ನೌಕರಿ ಸಿಗದೇ ಇರುವ ಪಕ್ಷದಲ್ಲಿ ಅಂತಹ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಸರ್ಕಾರ ನಿರುದ್ಯೋಗದ ಭತ್ಯೆಯನ್ನು ನೀಡಲಿದೆ.

ಇನ್ನೂ ಸ್ನೇಹಿತರೆ ಮುಖ್ಯವಾಗಿ ಪದವಿ ಪಾಸ್ ಆಗಿ 6 ತಿಂಗಳು ನಿಮಗೇನಾದರೂ ಉದ್ಯೋಗ/ನೌಕರಿ ಸಿಗದಿದ್ದರೆ ಮಾತ್ರ ಆಗ ಮಾತ್ರ ನಿರುದ್ಯೋಗದ ಭತ್ಯೆ ಅಂತ ಪದವಿದರರಿಗೆ ₹3000/-, ಡಿಪ್ಲೊಮಾ ಪದವಿದರರಿಗೆ 1500 ಸಿಗಲಿದ್ದು, ತದನಂತರ ಉದ್ಯೋಗ ಸಿಗುವ ತನಕ ಅಥವಾ 2 ವರ್ಷಗಳು ಮಾತ್ರ ಈ ಯುವನಿಧಿ ಭತ್ಯೆ ಸಿಗಲಿದೆ..

ನೀವೇನಾದರೂ ಪದವಿ ಪಾಸ್ ಆಗಿ ಮುಂದಿನ ಉನ್ನತ ವ್ಯಾಸಂಗಕ್ಕೆ ಹೋಗುವಂತಹ ಅಭ್ಯರ್ಥಿಗಳು ಈ ಯುವ ನಿಧಿ ಯೋಜನೆಗಳಿಗೆ ಅರ್ಹರಾಗಿರುವುದಿಲ್ಲಾ. ಇನ್ನೂ ಸ್ನೇಹಿತರೆ ರಾಜ್ಯ ಸರ್ಕಾರದಿಂದ ನೀವೇನಾದರೂ ಯಾವುದಾದರೂ ಯೋಜನೆಗಳಿಂದ ಸಹಾಯಧನ ಪಡೆದು ಸ್ವಯಂ ಉದ್ಯೋಗ ಆರಂಭಿಸಿದ್ರೆ ಈ ಯುವ ನಿಧಿ ಯೋಜನೆಯ ಫಲಾನುಭವಿಗಳು ಅಗಿರುವುದಿಲ್ಲ.. ಈ ಯೋಜನೆಗೆ ಅರ್ಹ ಪದವಿದರ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಅವರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಹಣ ಜಮಾವಣೆ ಆಗಲಿದೆ..

ಅರ್ಜಿ ಸಲ್ಲಿಕೆಗೆ ಪ್ರಮುಖ ದಾಖಲೆಗಳು ಕಡ್ಡಾಯವಾಗಿ ಬೇಕು.

1) ಆಧಾರ್ ಕಾರ್ಡ್
2) 10ನೇ ತರಗತಿ ಅಂಕಪಟ್ಟಿ
3) ದ್ವಿತೀಯ ಪಿಯುಸಿ ಅಂಕಪಟ್ಟಿ
4) ಪದವಿ ಅಂಕಪಟ್ಟಿ ಮತ್ತು ಪ್ರಮಾಣಪತ್ರ
5) ಡಿಪ್ಲೊಮಾ ಪ್ರಮಾಣಪತ್ರ
6) ಮೊಬೈಲ್ ನಂಬರ್
7) ಬ್ಯಾಂಕ್ ಖಾತೆ ವಿವರಗಳು
8) ಸೆಲ್ಫ್ ಡಿಕ್ಲೆರೇಷನ್ ಪ್ರತಿ ಬೇಕಾಗುತ್ತದೆ..

Leave a Comment