ಈ ದಿನಕ್ಕೆ ಅನುಗುಣವಾಗಿ ದೇವರಿಗೆ ವೀಳ್ಯದೆಲೆ ಅರ್ಪಿಸಿದರೆ, ಹಣದ ಮಳೆಯಾಗೋದು ಗ್ಯಾರಂಟಿ..!

ಹೌದು ನಮ್ಮ ಹಿಂದೂ ಶಾಸ್ತ್ರದಲ್ಲಿ ಅಥವಾ ನಮ್ಮ ಹಿಂದೂ ಧರ್ಮದಲ್ಲಿ ಹಾಗೂ ಜೋತಿಷ್ಯ ಶಾಸ್ತ್ರದಲ್ಲಿ
ವೀಳ್ಯದೆಲೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಈ ವೀಳ್ಯದೆಲೆಯನ್ನು ಮದುವೆ, ವಿವಿಧ
ಶುಭ ಕೆಲಸ ಕಾರ್ಯಗಳಲ್ಲಿ ಉಪಯೋಗಿಸಲಾಗುತ್ತದೆ.. ಶುಭ ಸಮಾರಂಭಗಳಲ್ಲಿ,ಕೆಲಸ ಕಾರ್ಯಗಳಲ್ಲಿ ಹಾಗೂ
ಪೂಜೆಯ ಸಮಯದಲ್ಲಿ ವೀಳ್ಯದೆಲೆಯನ್ನು ಬಳಕೆ ಮಾಡುವುದರಿಂದ ಭಗವಂತನ ಆಶೀರ್ವಾದ ಸಿಗುತ್ತದೆ
ಎಂದು ಜೋತಿಷ್ಯ ಶಾಸ್ತ್ರದಲ್ಲಿ ನಂಬಲಾಗಿದೆ..

ಹೌದು ಜ್ಯೋತಿಷ್ಯ ಕೆಲವು ಪರಿಹಾರಗಳಿಗಾಗಿಯೂ ಸಹ ವೀಳ್ಯದೆಲೆಯನ್ನು ಬಳಸುತ್ತಾರೆ.
ಹೌದು ಹಿಂದೂ ಶಾಸ್ತ್ರದಲ್ಲಿ ದೇವರು ಹಾಗೂ ದೇವತೆಗಳಿಗೆ ವೀಳ್ಯದೆಲೆಯನ್ನು ಅತ್ಯಂತ ಭಕ್ತಿಯಿಂದ
ಈ ದಿನಗಳಿಗೆ ಅನುಗುಣವಾಗಿ ಸಮರ್ಪಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆಂದು
ಹಿಂದೂ ಧರ್ಮದಲ್ಲಿ ತಿಳಿಸಲಾಗಿದೆ.

ಹೌದು ಯಾವ ದೇವರಿಗೆ ಯಾವ ದಿನ ವಿಳ್ಳೆದೆಲೆಯನ್ನು ಹೇಗೆ ಮತ್ತು ಯಾವ ಸಮಯದಲ್ಲಿ ಅರ್ಪಿಸಬೇಕು
ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ ಒಂದು ಬಾರಿ ನಿಮ್ಮ ಲಾಭಕ್ಕಾಗಿ ಈ ಲೇಖನವನ್ನು
ಸಂಪೂರ್ಣವಾಗಿ ಓದಿ ಹಾಗೆ ಭಕ್ತಿಯಿಂದ ಗಣೇಶನಿಗೆ ಲೈಕ್ ಕೊಟ್ಟು , ಗಣೇಶನ ಕೃಪೆಗಾಗಿ
ಓಂ ಗಮ್ ಗಣಪತಿಯೇ ನಮಃ ಅಂತ ಕಾಮೆಂಟ್ ಮಾಡಿ.
ಗಣೇಶನ ಕೃಪ ಕಟಾಕ್ಷಾ ನಮ್ಮ ಮೇಲೆ ಇದ್ದರೆ, ಸಕಲ ಐಶ್ವರ್ಯ ಭೋಗ ಭಾಗ್ಯಗಳು ನಮ್ಮದಾಗುತ್ತೆ..

ಮೊದಲನೇಯದ್ದು ​ಸೋಮವಾರ :
ಸೋಮವರವನ್ನು ಶಿವನ ದಿನವೆಂದು ಪರಿಗಣಿಸಲಾಗಿದೆ ಮತ್ತು ಈ ಸೋಮವಾರದಂದು
ಶಿವನನ್ನು ಪೂಜಿಸಲಾಗುತ್ತದೆ. ಈ ದಿನದಂದು ಸ್ನಾನ ಮುಗಿಸಿ ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ
ಬಿಲ್ವಪತ್ರೆಯ ಜೊತೆಗೆ 11 ವೀಳ್ಯದೆಲೆಯನ್ನು ಶಿವನಿಗೆ ದೇವಸ್ಥಾನಕ್ಕೆ ಹೋಗಿ ಶಿವನಿಗೆ ಅರ್ಪಿಸಬೇಕು,
ಹೀಗೆ 5 ಸೋಮವಾರ ಮಾಡಬೇಕು, ಈ ರೀತಿ ಈ ಪರಿಹಾರವನ್ನು ಮಾಡುವುದರಿಂದ,
ಜೀವನದಲ್ಲಿ ಸಂತೋಷ ಹೆಚ್ಚಾಗುವುದು. ಹಾಗೆ ನಿಮ್ಮ ಸ್ಥಗಿತಗೊಂಡ ಕೆಲಸಗಳು ಕಾರ್ಯ ಸಹ ಪೂರ್ಣಗೊಳ್ಳುತ್ತವೆ.

ಎರಡನೆಯದು ​ಮಂಗಳವಾರ :
ಮಂಗಳವಾರವನ್ನು ಹನುಮಂತನ ದಿನವೆಂದು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ. ಆದ್ದರಿಂದ
ಮಂಗಳವಾರ ಸಂಜೆ ಸಮಯದಲ್ಲಿ ಸ್ನಾನ ಮಾಡಿ 21 ವಿಳ್ಳೆದೆಲೆ ಮತ್ತು ಕೇಸರಿ ಬಣ್ಣದ ಕುಂಕುಮವನ್ನು
ತೆಗೆದುಕೊಂಡು ನಂತರ ಆ 21 ವೀಳ್ಯದೆಲೆಯ ಮೇಲೆ ಕೇಸರಿ ಬಣ್ಣದ ಕುಂಕುಮವನ್ನು ಇರಿಸಿ ಮತ್ತು
ಅವುಗಳನ್ನು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಆಂಜನೇಯ ಸ್ವಾಮಿಗೆ ಅರ್ಪಿಸಿ.
ಈ ರೀತಿ 3 ಮಂಗಳವಾರ ಮಡಿ ಹುಡಿಯಿಂದ ಮಾಡಬೇಕು, ಈ ರೀತಿ ಈ ಪರಿಹಾರದಿಂದ
ಹನುಮಂತನ ಅನುಗ್ರಹವು ನಿಮ್ಮ ಮೇಲಿರಲಿದೆ ಮತ್ತು ನೀವು ಅವನ ಆಶೀರ್ವಾದವನ್ನು
ಸಹ ಪಡೆಯುತ್ತೀರಿ ಜೊತೆಗೆ ಮಾಡುವಂತಹ ಕೆಲಸ ಕಾರ್ಯಗಳು ಸಹ ಜಯ ಆಗುತ್ತವೆ.

ಮೂರನೇಯದ್ದು ​ಬುಧವಾರ :
ಬುಧವಾರವನ್ನು ಗಣೇಶನ ದಿನವೆಂದು ಪರಿಹಾರದ ಶಾಸ್ತ್ರದಲ್ಲಿ ಪರಿಗಣಿಸಲಾಗುತ್ತದೆ.
ಹಾಗಾಗಿ ಈ ದಿನದಂದು 5ವೀಳ್ಯದೆಲೆಯ ಜೊತೆಗೆ 5 ಅಡಿಕೆಯನ್ನು ತೆಗೆದುಕೊಂಡು,
ಆ ಒಂದೊಂದು ವಿಳ್ಳೆದೆಲೆಯ ಮೇಲೆ ಒಂದೊಂದು ಅಡಿಕೆಯನ್ನು ಇಟ್ಟು, ಗಣೇಶನಿಗೆ ಅರ್ಪಿಸಬೇಕು
ಈ ಕೆಲಸ ವನ್ನು 5 ಬುಧವಾರ, ಬೆಳಿಗ್ಗೆ ಅಥವಾ ಸಂಜೆ ಸಮಯದಲ್ಲಿ ಅತ್ಯಂತ ಭಕ್ತಿಯಿಂದ ಮಾಡಬೇಕು,
ಈ ರೀತಿ ಈ ಪರಿಹಾರವನ್ನು ಮಾಡುವುದರಿಂದ ನೀವು ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು
ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ನಾಲ್ಕೈದು ​ಶುಕ್ರವಾರ :
ಶುಕ್ರವಾರವನ್ನು ಲಕ್ಷ್ಮಿ ದೇವಿಯ ದಿನವೆಂದು ಶಾಸ್ತದಲ್ಲಿ ಪರಿಗಣಿಸಲಾಗುತ್ತದೆ.
ಈ ದಿನ, ಬೆಳಿಗ್ಗೆ ಬ್ರಹ್ಮೀ ಮುಹೂರ್ತದಲ್ಲಿ 11 ವೀಳ್ಯದೆಲೆಗಳನ್ನು ತೆಗೆದುಕೊಂಡು ಸ್ವಚ್ಚವಾದ ನೀರಿನಿಂದ
ತೊಳೆದು ನಂತರ ಆ ಎಲೆಗಳ ಮೇಲೆ ಅರಿಶಿನ, ಕುಂಕುಮವನ್ನು ಹಚ್ಚಬೇಕು, ಒಂದೊಂದು
ಎಲೆಗೆ ಅರಿಶಿನ ಕುಂಕುಮ ಹಚ್ಚುವಾಗ ನಿಮಗೆ ಇರುವ ಹಣಕಾಸಿನ(money) ಸಮಸ್ಯೆಯನ್ನು ಹೇಳಿಕೊಂಡು
ಲಕ್ಷ್ಮಿ ದೇವಿಯ ಪಾದಗಳಿಗೆ ಒಂದೊಂದೇ ಅರ್ಪಿಸಬೇಕು.ಈ ರೀತಿಯಾಗಿ 5 ಶುಕ್ರವಾರ ಮಾಡಿ.
ಹೀಗೆ 5 ಶುಕ್ರವಾರ ಇದನ್ನು ಮಾಡುವುದರಿಂದ, ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತವೆ.

ಐದನೇಯದ್ದು ​ಶನಿವಾರ :
ಶನಿವಾರ ಶನಿ ದೇವರ ದಿನ. ಶನಿವಾರವನ್ನು ನ್ಯಾಯ ದೇವರಾದ ಶನಿದೇವರ ದಿನ ಎಂದು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ.
ನೀವು ಶನಿದೋಷದಿಂದ ಬಳಲುತ್ತಿದ್ದರೆ ಹಾಗೂ ಶನಿಯ ಕಟ್ಟ ಪ್ರಭಾವ ನಿಮ್ಮ ಮೇಲೆ ಇದ್ದರೆ ಶನಿವಾರದಂದು
ಸಂಜೆ ಸಮಯದಲ್ಲಿ 3 ವೀಳ್ಯದೆಲೆಯನ್ನು ತೆಗೆದುಕೊಂಡು ಆ ವಿಳ್ಳೆದೆಲೆಯ ಮೇಲೆ ಕಪ್ಪು ಎಳ್ಳು ಹಾಕಿ ಅದರ
ಮೇಲೆ ಸಾಸಿವೆ ಎಣ್ಣೆಯನ್ನು ಹಾಕಿ, ಶನಿ ದೇವರಿಗೆ ಅರ್ಪಿಸಿ.
ಈ ರೀತಿಯಾಗಿ 5 ಶನಿವಾರ ಮಾಡಬೇಕು, ಈ ಪರಿಹಾರವನ್ನು ಶನಿದೇವರಿಗೆ ಮಾಡುವುದರಿಂದ
ನಿಮ್ಮ ಜೀವನದ ಸಮಸ್ಯೆಗಳನ್ನು ಪರಿಹರವಾಗುತ್ತವೆ.

ಆರನೆಯದ್ದು ​ಭಾನುವಾರ
ಭಾನುವಾರವನ್ನು ಸೂರ್ಯ ದೇವರ ದಿನವೆಂದು ಶಾಸ್ತ್ರದಲ್ಲಿ ಪರಿಗಣಿಸಲಾಗಿದೆ.
ಸೂರ್ಯದೇವನಿಗೆ ಭಾನುವಾರ ದಿನ ಬೆಳಿಗ್ಗೆ 7 ಗಂಟೆಯ ಒಳಗೆ ಒಂದು ವೀಳ್ಯದೆಲೆಯನ್ನು
ತಾಮ್ರದ ಚಂಬಿನಲ್ಲಿ ಹಾಕಿ ಅರ್ಪಿಸುವುದರಿಂದ ರೋಗದ ದೋಷಗಳು ನಿವಾರಣೆಯಾಗುತ್ತವೆ
ಹಾಗು ಸೂರ್ಯ ದೇವನ ಅನುಗ್ರಹವೂ ಲಭಿಸುತ್ತದೆ.ಈ ಪರಿಹಾರವನ್ನು 5 ಭಾನುವಾರ ಮಾಡಬೇಕು.

ಓಂ ಗಮ್ ಗಣಪತಿಯೇ ನಮಃ ಅಂತ ಕಾಮೆಂಟ್ ಮಾಡಿ..ಗಣೇಶನ ಕೃಪ ಕಟಾಕ್ಷಾ ನಮ್ಮ
ಮೇಲೆ ಇದ್ದರೆ, ಸಕಲ ಭೋಗ ಭಾಗ್ಯಗಳು ನಮ್ಮದಾಗುತ್ತೆ.

Leave a Comment